ಅತ್ಯಂತ ಖುಷಿಯಿಂದ ನಾವು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ). ಎಂದು ಹೆಮ್ಮೆಯಿಂದ ನಮ್ಮ ಪರಿಚಯ ಮಾಡುತ್ತಿದ್ದೇವೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ). ಆಧುನಿಕ ಸಮಾಜದ ಕನ್ನಡಿಯೆಂದೇ ಹೇಳಬಹುದು.ಪತ್ರಕರ್ತನು ಸ್ಥಳಿಯ ಮತ್ತು ಹೊರನಾಡಿನ ಪ್ರಸ್ತುತ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೋದ್ಯಮದ ಮೂಲಕ ವಿವರಿಸುತ್ತ ಹೋಗುತ್ತಾನೆ.ನಾಡು, ನುಡಿ, ನೆಲ, ಜಲ, ರಾಜಕೀಯ, ಸಾಮಾಜಿಕ, ಆರ್ಥಿಕ, ವಿಜ್ಞಾನ ಮುಂತಾದ ವಿಚಾರಗಳ ಕುರಿತು ನಿಖರ ಸುದ್ದಿ, ಉತ್ತಮ ವಿಶ್ಲೇಷಣೆ ಹಾಗೂ ಪ್ರಪಂಚದ ಫ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಜನತೆಗೆ ತಲುಪಿಸುವಲ್ಲಿ ಪತ್ರಕರ್ತ ತನ್ನ ಪಾತ್ರ ನಿರ್ವಹಿಸುತ್ತಾ, ಸಮಾಜದೊಂದಿಗೆ ಬೆರೆಯುತ್ತಾ, ಜನಾಭಿಪ್ರಾಯ ಮೂಡಿಸುತ್ತಾ, ಸಮಾಜದ ಉತ್ತಮ ಪ್ರತಿಭೆಗಳನ್ನು ಪರಿಚಯಿಸುತ್ತಾ, ಓರೆಕೋರೆಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಹೀಗೆ ಪತ್ರಕರ್ತ ಪ್ರತಿಯೊಂದು ಕ್ಷಣವನ್ನೂ ಸಮಾಜಕ್ಕೆ ಮೀಸಲಿಟ್ಟು ಶ್ರಮಿಸುತ್ತಾನೆ.ಹಾಗಾಗಿ ಮಾಧ್ಯಮ ರಂಗವನ್ನು ಸಮಾಜದ ನಾಲ್ಕನೇ ಅಂಗ ಎಂದು ಕರೆದಿದ್ದಾರೆ.
Copyright ©2023 ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ).